ಕಾಂಗ್ರೆಸ್, ಬಿಜೆಪಿ ತೊರೆದು ಜೆಡಿಎಸ್ ಗೆ ಸೇರ್ಪಡೆ

169

Get real time updates directly on you device, subscribe now.


ತುರುವೇಕೆರೆ: ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ ತೊರೆದ ತಾಲ್ಲೂಕಿನ ನೂರಾರು ಕಟ್ಟಡ ಕಾರ್ಮಿಕರು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು.

ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿರುವ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ನೂರಾರು ಕಟ್ಟಡ ಕಾರ್ಮಿಕರು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಅವರೊಂದಿಗೆ ಜೆಡಿಎಸ್ ಪಕ್ಷ ಸೇರುವ ಬಗ್ಗೆ ಚರ್ಚೆ ನಡೆಸಿದರು. ಪಕ್ಷದ ಲಾಂಛನವುಳ್ಳ ಶಾಲು ಹೊದಿಸುವ ಮೂಲಕ ಕಟ್ಟಡ ಕಾರ್ಮಿಕರನ್ನು ಆತ್ಮೀಯವಾಗಿ ಬರ ಮಾಡಿಕೊಂಡು ವೈಯಕ್ತಿಕವಾಗಿ ಅಭಿನಂದಿಸಿದರು.

ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಂದ ಬೇಸತ್ತು ನಮ್ಮ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಕಟ್ಟಡ ಕಾರ್ಮಿಕರನ್ನು ಅತ್ಯಂತ ಗೌರವಯುತವಾಗಿ ನಡೆಸಿಕೊಳ್ಳಲಾಗುವುದು. ಕಟ್ಟಡ ಕಾರ್ಮಿಕರ ನ್ಯಾಯಯುತ ಬೇಡಿಕೆ ಪೂರೈಸಲು ಬದ್ಧನಾಗಿದ್ದು, ಅವರ ಹೋರಾಟಗಳಿಗೆ ಸಾಥ್ ನೀಡುವುದಾಗಿ ತಿಳಿಸಿದ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನನ್ನ ಗೆಲುವಿಗೆ ಪೂರಕವಾಗಿ ಕಟ್ಟಡ ಕಾರ್ಮಿಕರು ಶ್ರಮಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್ ಪಕ್ಷ ಸೇರ್ಪಡೆಗೊಂಡ ಕಟ್ಟಡ ಕಾರ್ಮಿಕರ ಪರವಾಗಿ ಬಸವರಾಜು ಹಾಗೂ ಅತ್ತಿಕುಳ್ಳೆಪಾಳ್ಯ ಕೃಷ್ಣಪ್ಪ ಮಾತನಾಡಿ, ಮಾಜಿ ಶಾಸಕರಾದ ಎಂ.ಟಿ.ಕೃಷ್ಣಪ್ಪನವರು ಕಾರ್ಮಿಕರ ಹಾಗೂ ಬಡವರ ಹಕ್ಕುಗಳಿಗಾಗಿ ಹೋರಾಟಕ್ಕಿಳಿಯುವ ಗುಣ ನಮ್ಮನ್ನು ಆಕರ್ಷಿಸಿತು. ಕ್ಷೇತ್ರದ ಜನತೆಗೆ ದಕ್ಷ ಆಡಳಿತ ನೀಡುವ ದಿಟ್ಟ ನಾಯಕ ಎಂ.ಟಿ. ಕೃಷ್ಣಪ್ಪನವರನ್ನು ಗೆಲ್ಲಿಸಲು ಪ್ರಾಮಾಣಿಕವಾಗಿ ಕಾರ್ಮಿಕರಾದ ನಾವುಗಳು ಶ್ರಮಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಚ ಚಂದ್ರೇಶ್, ತಾಲ್ಲೂಕು ಯುವ ಘಟಕದ ಅಧ್ಯಕ್ಷ ರಮೇಶ್, ವಕ್ತಾರ ಯೋಗೀಶ್, ಗ್ರಾಪಂ ಅಧ್ಯಕ್ಷ ಪುನೀತ್, ಪಪಂ ಸದಸ್ಯರಾದ ಎನ್.ಆರ್.ಸುರೇಶ್, ಮಧು, ಮುಖಂಡರಾದ ವೆಂಕಟೇಶ್ ಕೃಷ್ಣಪ್ಪ, ವಿಜಯಕುಮಾರ್, ಬಸವರಾಜು, ಕಲ್ಲಬೋರನಹಳ್ಳಿ ಜಯರಾಮ್, ಹರೀಶ್, ಮಹ್ಮದ್ ಹುಸೇನ್, ಬಾವಿಕೆರೆ ಸುರೇಶ್ ಮತ್ತಿತರಿದ್ದರು.

Get real time updates directly on you device, subscribe now.

Comments are closed.

error: Content is protected !!