ಜಿಪಂ ಸಿಇಒ ವಿರುದ್ಧವೇ ರವಿಬಾಬು ಆರೋಪ

ನಿಮ್ಮ ಅಸಮರ್ಪಕ ಕಾರ್ಯದಿಂದ ಪಂಚಾಯ್ತಿಗಳಲ್ಲಿ ಅಕ್ರಮ ಹೆಚ್ಚಿದೆ

223

Get real time updates directly on you device, subscribe now.


ಕುಣಿಗಲ್: ಜಿಪಂ ಸಿಇಒ ಅಸಮರ್ಪಕ ಕಾರ್ಯ ನಿರ್ವಹಣೆಯಿಂದಲೆ ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಅಕ್ರಮ ಹೆಚ್ಚಾಗಿದೆ ಎಂದು ಜಿಪಂ ಮಾಜಿ ಅಧ್ಯಕ್ಷ ಡಾ.ರವಿಬಾಬು ನೇರವಾಗಿ ಜಿಪಂ ಸಿಇಒ ಅವರನ್ನೆ ದೂರಿದ ಘಟನೆ ನಡೆಯಿತು.

ಮಂಗಳವಾರ ತಾಪಂ ಸಭಾಂಗಣದಲ್ಲಿ ಜಿಪಂ ಸಿಇಒ ಡಾ.ವಿದ್ಯಾಕುಮಾರಿಯವರಿಂದ ಸಾರ್ವಜನಿಕ ಕುಂದುಕೊರತೆ ಸಭೆ ಹಮ್ಮಿಕೊಳ್ಳಲಾಗಿತ್ತು.

ಸಭೆಗೆ ಅಗಮಿಸಿದ ಕೆಲವರು ನರೇಗಾ ಕಾಮಗಾರಿಯಲ್ಲಿ ಸಾಮಾಗ್ರಿ ಪೂರೈಕೆಯ ಸರಾಸರಿ ನಿಯಮ ಮೀರಿದ್ದು ಬಿಲ್ ತಡೆ ಹಿಡಿಯಲಾಗಿದೆ. ಬಿಲ್ ನೀಡುವಂತೆ ವಾಗ್ವಾದ ನಡೆಸಿದರಲ್ಲದೆ ಕಾಮಗಾರಿ ಸಾಮಾಗ್ರಿ ಸರಬರಾಜು ಮಾಡಿದ್ದ ವ್ಯಕ್ತಿಯೋರ್ವ ವಿಷ ಸೇವಿಸುವ ಬೆದರಿಕೆ ಸಹ ಹಾಕಿದರು. ಈ ವೇಳೆ ಬಹುತೇಕರು ಜಿಪಂ ಸಿಇಒ ಅವರಿದ್ದ ವೇದಿಕೆಯತ್ತ ಧಾವಿಸಿ ತಡೆ ಹಿಡಿದಿರುವ ಬಿಲ್ ಬಿಡುಗಡೆಗೆ ಆಗ್ರಹಿಸಿದರು.

ಜಿಪಂ ಮಾಜಿ ಅಧ್ಯಕ್ಷ ಡಾ.ರವಿಬಾಬು ಮಾತನಾಡಿ, ತಾಲೂಕಿನಲ್ಲಿ ಈ ಹಿಂದೆ ಇದೇ ರೀತಿ ಆಗಿ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮತ್ತೆ ಕೆಲವರು ಮಾನಸಿಕ ಅಘಾತಕ್ಕೆ ಸಿಲುಕಿದ್ದಾರೆ. ಗ್ರಾಪಂ ಪಿಡಿಒ ಅನುಮೋದನೆ ನೀಡಿದ್ದರಿಂದ ಸರಬರಾಜು ಮಾಡಲಾಗಿದೆ. ಕೆಲ ಗ್ರಾಪಂಗಳಲ್ಲಿ ಅನುಮತಿ ನೀಡಿ ಕೆಲವೆಡೆ ಬಿಲ್ ತಡೆ ಹಿಡಿದಿರುವುದು ಅರ್ಥ ಇಲ್ಲ. ಕಳೆದ ಕೆಲವಾರು ವರ್ಷಗಳಿಂದ ಇದೇ ರೀತಿ ನಡೆದಿದ್ದು ನಿಮ್ಮ ಅವಧಿಯಲ್ಲೆ ಹೆಚ್ಚು ಗೊಂದಲ, ಅಕ್ರಮ ಸೃಷ್ಟಿಯಾಗಿದೆ. ದೂರು ಬಂದ ಪಿಡಿಒಗಳನ್ನು ಏಕಾಏಕಿ ಇಷ್ಟಬಂದ ಹಾಗೆ ಬೇರೆ ಕಡೆ ನಿಯೋಜಿಸಿ ಅವರ ರಕ್ಷಣೆಗೆ ನಿಲ್ಲುತ್ತೀರಾ, ಸಾಮಾಗ್ರಿ ಸರಬರಾಜು ಮಾಡಿದವರು ಏನಾಗಬೇಕು. ಎಲ್ಲಾ ನಿಮ್ಮ ಮನಸಿಗೆ ಬಂದ ಹಾಗೆ ನಡೆಯುತ್ತಿದೆ. ವಾರಕ್ಕೊಬ್ಬ ಪಿಡಿಒಗಳನ್ನು ವರ್ಗಾ ಮಾಡಿದ್ದೀರಾ, ನಮ್ಮಬಳಿ ದಾಖಲೆ ಇದೆ. ಬೇಕಾದರೆ ನಾನು ದಾಖಲೆ ಸಮೇತ ಮುಂದಿಡುತ್ತೇನೆ. ನಿಮ್ಮ ಮೇಲೆ ದೂರು ಕೊಡಲು ಸಿದ್ಧ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಇಒ, ನಿಯಮಗಳ ಉಲ್ಲಂಸಿರುವುದರಿಂದ ಬಿಲ್ ಪಾವತಿ ಮಾಡಲು ಆಯುಕ್ತರ, ಸರ್ಕಾರ ಗಮನಕ್ಕೆ ತರಬೇಕಿದೆ. ನಮ್ಮ ಹಂತದಲ್ಲಿ ಏನು ಇಲ್ಲ. ನನಗೆ ಲಾಗಿನ್ ವ್ಯವಸ್ಥೆ ಸಹ ಇಲ್ಲ. ನಿಯಮ ಉಲ್ಲಂಘನೆ ಆಗಿರುವುದರಿಂದ ಸಮಸ್ಯೆ ಆಗಿದೆ. ಈ ನಿಟ್ಟಿನಲ್ಲಿ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳುವ ಭರವಸೆ ನೀಡಿದ ಮೇರೆಗೆ ಡಾ.ರವಿಬಾಬು ಸೂಕ್ತ ಕಾಲಾವಕಾಶ ದೊಳಗೆ ಬಗೆಹರಿಸಬೇಕು ಎಂದರು.

ಸಭೆಯಲ್ಲಿ ಬಹುತೇಕ ಗ್ರಾಪಂ ಸದಸ್ಯರು,ಉಪಾಧ್ಯಕ್ಷರು, ಅಧ್ಯಕ್ಷರುಗಳೆ ದೂರು ಸಲ್ಲಿಸಿ ಪಿಡಿಒಗಳ ಅಸಮರ್ಪಕ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮದಲ್ಲಿನ ಶಾಲೆಗಳ ಸ್ವತ್ತಿಗೆ ಇ- ಸ್ವತ್ತು ಮಾಡುತ್ತಿಲ್ಲ. ಖಾತೆ ಮಾಡಿ ಹದ್ದುಬಸ್ತು ಮಾಡಲು ಪಿಡಿಒ ಐವತ್ತುಸಾವಿರ ಕೇಳುತ್ತಾರೆ. ದಲಿತರಿಗೆ ಮಂಜೂರಾತಿ ಆಗಿರುವ ಪ್ರದೇಶಕ್ಕೆ ಖಾತೆ ಮಾಡುತ್ತಿಲ್ಲ ಎಂದು ವಿವಿಧ ಪಿಡಿಒಗಳ ಮೇಲೆ ದೂರು ದಾಖಲಾಯಿತು. ಕೆ.ಹೊನ್ನಮಾಚನಹಳ್ಳಿ ಗ್ರಾಪಂಯ ಸಮಸ್ಯೆ ಬಗೆಹರಿಸುವಂತೆ ಅಧ್ಯಕ್ಷ ವೆಂಕಟೇಶ್, ಆಡಳಿತಾಧಿಕಾರಿ ಅತೀಕ್ ಪಾಶ ಅವರಿಗೆ ದೂರು ಸಲ್ಲಿಸಿದರು.

ಕುಂದು ಕೊರತೆ ಆಲಿಸಿದ ನಂತರ ಪಿಡಿಒಗಳನ್ನುದ್ದೇಶಿಸಿ ಮಾತನಾಡಿ ಸಿಇಒ ಡಾ.ವಿದ್ಯಾಕುಮಾರಿ, ಎಲ್ಲಾ ಪಿಡಿಗಳು ಮೊದಲು ಗಮನದಲ್ಲಿಟ್ಟುಕೊಳ್ಳಿ. ನರೇಹಾ ಯೋಜನೆ ಗುತ್ತಿಗೆ ಆಧಾರಿತ ಯೋಜನೆಯಲ್ಲ. ಜನರಿಗೆ ಉದ್ಯೋಗ ಕಲ್ಪಿಸಿ, ಮೂಲ ಸೌಕರ್ಯ ವೃದ್ಧಿಸುವ ಯೋಜನೆ, ಸಮುದಾಯ ಆಧಾರಿತ ಕಾಮಗಾರಿಗೆ ಹೆಚ್ಚು ಒತ್ತುನೀಡಿ, 60/40 ಅನುದಾನದ ಮಾನದಂಡ ಕಟ್ಟುನಿಟ್ಟಾಗಿ ಪಾಲಿಸಿ. ಇಲ್ಲವಾದಲ್ಲಿ ಬಿಲ್ ಆಗುವುದಿಲ್ಲ. ಇಡೀ ಜಿಲ್ಲೆಯಲ್ಲಿ ಕುಣಿಗಲ್ ತಾಲೂಕಿನಲ್ಲೆ ಈ ರೀತಿ ಸಮಸ್ಯೆ ಹೆಚ್ಚು. ಸಾರ್ವಜನಿಕರು ನೀಡುವ ಅರ್ಜಿಗೆ ಸ್ಪಷ್ಟ ಹಿಂಬರಹ ನೀಡಿ ಸಭೆಯಲ್ಲಿ 68 ಅರ್ಜಿ ಬಂದಿದ್ದು ಎಲ್ಲವನ್ನು ಆಯಾ ಗ್ರಾಪಂಗೆ ಕಳುಹಿಸಲಾಗುವುದು. ತುರ್ತಾಗಿ, ಸ್ಪಷ್ಟವಾಗಿ ಉತ್ತರ ನೀಡಿ ಎಂದರು.

ಜಿಪಂ ಕಾರ್ಯದರ್ಶಿ, ತಾಪಂ ಆಡಳಿತಾಧಿಕಾರಿ ಅತೀಕ್ ಪಾಷ, ಯೋಜನಾಧಿಕಾರಿ ಸಣ್ಣ ಮರಿಯಪ್ಪ, ಯೋಜನಾ ನಿರ್ದೇಶಕ ನರಸಿಂಹಯ್ಯ, ತಾಪಂ ಇಒ ಜೋಸೆಫ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!