ಮಧುಗಿರಿ: ಹರಿಯುತ್ತಿದ್ದ ಜಯಮಂಗಲಿ ನದಿಯಲ್ಲಿ ಮಕ್ಕಳ ಜೊತೆ ಆಟವಾಡುತಿದ್ದ ವೇಳೆ ಇಬ್ಬರು ಪುಟ್ಟ ಬಾಲಕಿಯರು ನೀರಲ್ಲಿ ಮುಳಗಿ ಸಾವನಪ್ಪಿರುವ ಘಟನೆ ನಡೆದಿದೆ.
ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿ ವೀರಾಪುರ- ಇಮ್ಮಡಗೊಂಡನ ಹಳ್ಳಿ ನಡುವೆ ಇರುವ ಜಯಮಂಗಲಿ ನದಿಯಲ್ಲಿ ಚೆಕ್ ಡ್ಯಾಂ ಬಳಿ ಘಟನೆ ನಡೆದಿದೆ. 5 ಜನ ಈಜಾಡಲು ಹೋಗಿದ್ದು ಈಜು ಬಾರದೆ ಆಳವಾದ ಗುಂಡಿಯಲ್ಲಿ ಇಬ್ಬರು ಸಹೋದರಿಯರು ಸಿಲುಕಿ ಒದ್ದಾಡಿದ್ದಾರೆ. 5 ನೇ ತರಗತಿಯ ಪ್ರಿಯಾಂಕ (10) ಹಾಗೂ 4 ನೇ ತರಗತಿ ಬಿಂದು (9) ಮೃತ ದುರ್ದೈವಿಗಳಾಗಿದ್ದಾರೆ. ಉಳಿದ 3 ಜನ ಮಕ್ಕಳನ್ನು ನದಿ ದಡದಲ್ಲಿ ಬಟ್ಟೆ ಹೊಗೆಯುತಿದ್ದ ಮಹಿಳೆ ರಕ್ಷಣೆ ಮಾಡಿದ್ದಾರೆ. ಸ್ಥಳಕ್ಕೆ ಕೊಡಿಗೇನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Comments are closed.