ತುಮಕೂರು ಗ್ರಾಮಾಂತರದಲ್ಲಿ ಪಂಚರತ್ನ ಯಾತ್ರೆ ಇಂದು

125

Get real time updates directly on you device, subscribe now.


ತುಮಕೂರು: ಮುಂದಿನ ಭಾವಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಪಂಚರತ್ನ ರಥಯಾತ್ರೆ ನಡೆಯುತ್ತಿದ್ದು, ಗುರುವಾರ ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಆಗಮಿಸಲಿದ್ದು, ಹೆಬ್ಬೂರಿನಲ್ಲಿ ಅದ್ದೂರಿ ಸ್ವಾಗತಕ್ಕೆ ಸಖಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೆಬ್ಬೂರಲ್ಲಿ ಇಪ್ಪತೈದು ಸಾವಿರ ಜನರೊಂದಿಗೆ ಸ್ವಾಗತ ಕೋರಲಾಗುತ್ತೆ. ಇಡೀ ಕರ್ನಾಟಕದ ಇತಿಹಾಸದಲ್ಲಿ ಅದ್ದೂರಿ ಸ್ವಾಗತ ಮಾಡಲಾಗುತ್ತಿದೆ. ಪ್ಯಾರಾ ಗೈಡಿಂಗ್ ಮೂಲಕ ಹೂವು ಹಾಕುವುದು ಹಾಗೂ ಡ್ರೋನ್ ಹಸಿರು, ಬಿಳಿ ಲಿಕ್ವಿಡ್ ಸಿಂಪಡನೆ ಮೂಲಕ ಸ್ವಾಗತ ಕೋರಲಾಗುವದು. ತುಮಕೂರು ಗ್ರಾಮಾಂತರದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಲಿದೆ ಎಂದರು.

ಇದೆಲ್ಲರದ ಜೊತೆ ಬಲೂನ್, ಅಂಬ್ರೆಲ್ಲಾ ಶೋ ಮಾಡಲಾಗುವುದು. ಲೈಟಿಂಗ್ ಅಳವಡಿಕೆ ಜೊತೆ ರಥ ಯಾತ್ರೆ ಸಾಗುವ ಗ್ರಾಮಗಳನ್ನು ಅದ್ದೂರಿಯಾಗಿ ಸಿಂಗಾರ ಮಾಡಲಾಗುವುದು. ಕುದುರೆ, ಪಂಜಿನ ಮೆರವಣಿಗೆ ಸಹ ಇರಲಿದೆ. ಇನ್ನೂರಕ್ಕು ಹೆಚ್ಚು ಜೆಸಿಬಿಗಳಲ್ಲಿ ಹೂ, ಹಣ್ಣಿನ ಹಾರ ಹಾಕಲಾಗುವುದು. ಐದು ಸಾವಿರ ಬೈಕ್, ಐನೂರು ಆಟೋ, ಕಾರು ಭಾಗವಹಿಸಲಿವೆ.

ನಾಲ್ಕು ಜನಪದ ಕಲಾ ತಂಡಗಳಲ್ಲಿ ಇನ್ನೂರು ಜನರು ಪ್ರದರ್ಶನ ನೀಡಲಿದ್ದಾರೆ. ಹೆಚ್ ಟು ಇವೆಂಟ್ ನ ಅನುರಾಧ ಭಟ್ ಅವರಿಂದ ಯಲ್ಲಾಪುರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಜೊತೆಗೆ ಲೇಜರ್ ಶೋ, ಲಕ್ಷ ದೀಪೋತ್ಸವ ಕಾರ್ಯಕ್ರಮ ಕೂಡ ನಡೆಯಲಿದೆ. ಇಪ್ಪತ್ತೈದು ಸಾವಿರ ಜನರಿಗೆ ಸ್ನ್ಯಾಕ್ಸ್ ಹಾಗೂ ಊಟದ ವ್ಯವಸ್ಥೆ ಇರಲಿದೆ ಎಂದರು.

ಹೆಬ್ಬೂರಿನಿಂದ ನಾಗವಲ್ಲಿ, ಗೂಳೂರು, ಊರ್ಡಿಗೆರೆ, ಬೆಳಗುಂಬ ಮೂಲಕ ಯಾತ್ರೆ ಸಾಗಲಿದ್ದು, ಯಲ್ಲಾಪುರದಲ್ಲಿ ರಾತ್ರಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!