ಬಸ್ ನಿಲುಗಡೆಗೆ ಒತ್ತಾಯಿಸಿ ಗ್ರಾಮಸ್ಥರ ಪ್ರತಿಭಟನೆ

85

Get real time updates directly on you device, subscribe now.


ಗುಬ್ಬಿ: ತಾಲ್ಲೂಕಿನ ಬಿದರೆಹಳ್ಳ ಕಾವಲ್ ಗೇಟ್ನಲ್ಲಿ ಸರಕಾರಿ ಬಸ್ ನಿಲ್ಲಿಸುವಂತೆ ಆಗ್ರಹಿಸಿ ಎನ್ಎಚ್206 ರಸ್ತೆಯಲ್ಲಿ ನೂರಾರು ಗ್ರಾಮಸ್ಥರು ಪ್ರತಿಭಟನೆ ಮಾಡಿದರು.

ಈ ಸಂದರ್ಭದಲ್ಲಿ ಮುಖಂಡ ಪನೀಂದ್ರ ಮಾತನಾಡಿ, ಸರ್ಕಾರಿ ಬಸ್ಗಳನ್ನು ಈ ಭಾಗದಲ್ಲಿ ನಿಲುಗಡೆ ಮಾಡುವುದರಿಂದ ಸುಮಾರು 10 ಕ್ಕೂ ಹೆಚ್ಚು ಗ್ರಾಮಗಳಿಗೆ ಅನುಕೂಲವಾಗುತ್ತದೆ. ಈ ಭಾಗದ ಕುಂದರನಹಳ್ಳಿ, ಅದಲಗೆರೆ, ಸಾಗರನಹಳ್ಳಿ, ತಿಮ್ಮಳ್ಳಿ ಪಾಳ್ಯ, ಸೋಪಾನಹಳ್ಳಿ, ಬೊಮ್ಮರಸನಹಳ್ಳಿ, ಮಾರಶೆಟ್ಟಿಹಳ್ಳಿ, ರಾಮ್ ಪುರ, ಸುಂಕಪುರ ಸೇರಿದಂತೆ ಹಲವು ಗ್ರಾಮದ ಸಾರ್ವಜನಿಕರಿಗೆ, ರೈತರಿಗೆ ಹಾಗೂ ಪ್ರತಿ ನಿತ್ಯ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸಾಕಷ್ಟು ಅನಾನುಕೂಲವಾಗುತ್ತದೆ. ಕೂಡಲೇ ಇನ್ನೂ ಒಂದು ವಾರದಲ್ಲಿ ಸರ್ಕಾರಿ ಬಸ್ ನಿಲುಗಡೆ ಮಾಡದೆ ಹೋದರೆ ಬೃಹತ್ ಪ್ರತಿಭಟನೆಯನ್ನು ಈ ಭಾಗದ ಹಳ್ಳಿಯ ಜನರು ಮಾಡುತ್ತೇವೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ದಲಿತ ಮುಖಂಡ ನಟರಾಜು ಮಾತನಾಡಿ, ಎಚ್ಎಎಲ್ ಘಟಕಕ್ಕೆ ನಮ್ಮ ಜಮೀನುಗಳನ್ನು ನಾವು ಬಿಟ್ಟುಕೊಟ್ಟಿದ್ದೇವೆ. ಹೆಚ್ಎಎಲ್ ಸ್ಟಾಪ್ ಎಂದು ಮಾಡಲಾಗಿದೆ. ಆದರೆ ಕುಂದರನಹಳ್ಳಿ ಗೇಟ್ನಲ್ಲಿ ಬಸ್ಗಳ ನಿಲುಗಡೆ ಇಲ್ಲ. ಹಾಗಾಗಿ ಇದರಿಂದ ಸಾಕಷ್ಟು ಸಮಸ್ಯೆಗಳಾಗಿವೆ. ಈಗಾಗಲೇ ಸಂಸದರು, ಶಾಸಕರು, ಅಧಿಕಾರಿಗಳಿಗೆ ಮನವಿ ನೀಡಿದ್ದರು ಸಹ ಯಾವುದೇ ಪ್ರಯೋಜನವಾಗಿಲ್ಲ. ಈ ಭಾಗದಲ್ಲಿ ನಿಲುಗಡೆ ಮಾಡುವುದರಿಂದ ಪ್ರತಿನಿತ್ಯ ಸಾವಿರಾರು ಜನರಿಗೆ ಅನುಕೂಲವಾಗುತ್ತದೆ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಸಿದ್ದರಾಮೆ ಗೌಡ, ನಟರಾಜು, ವಿಶ್ವನಾಥ್, ರವೀಶ್, ಪ್ರಸಾದ್, ಶಂಕರ್, ಹನುಮಂತ್ ಇನ್ನಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!