ಬಿಜೆಪಿಯ ಬೂತ್ ವಿಜಯ್ ಅಭಿಯಾನ ಆರಂಭ

210

Get real time updates directly on you device, subscribe now.


ತುಮಕೂರು: ಮುಂದಿನ 2023 ರ ವಿಧಾನಸಭೆ ಹಾಗೂ 2024 ರ ಲೋಕಾಸಭಾ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ತುಮಕೂರು ಜಿಲ್ಲಾ ಉಸ್ತುವಾರಿ ಹಾಗು ವಿಧಾನಪರಿಷತ್ ಸದಸ್ಯ ನವೀನ್ ನೇತೃತ್ವದಲ್ಲಿ ಸಂಒವಾರ ದಿಂದ ಜನವರಿ 12 ರ ವರೆಗೆ ಬೂತ್ ವಿಜಯ ಅಭಿಯಾನ ಆರಂಭವಾಯಿತು.

ಸಿದ್ಧರಾಮೇಶ್ವರ ಬಡಾವಣೆ ಪಶ್ಚಿಮ 3ನೇ ಕ್ರಾಸ್ ನಲ್ಲಿರುವ 224ನೇ ಬೂತ್ ಅಧ್ಯಕ್ಷ ಜಗದೀಶ್ ಅವರ ಮನೆಯಿಂದ ಬೂತ್ ವಿಜಯ ಅಭಿಯಾನ ಆರಂಭಿಸಲಾಯಿತು. ಬೂತ್ ಕಮಿಟಿಯ ಸದಸ್ಯರ ಪರಿಶೀಲನೆ, ಅವರನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಯಿತು.

ಸಿದ್ದರಾಮೇಶ್ವರ ಬಡಾವಣೆಯ ವಾರ್ಡ್ ನಂ.35 ಕ್ಕೆ ಒಳಪಟ್ಟ 224 ನೇ ಬೂತ್ ಅಧ್ಯಕ್ಷ ಜಗದೀಶ್ ಅವರ ಮನೆಯಲ್ಲಿ ಬೂತ್ ವಿಜಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ ಮಾತನಾಡಿ, ಜನವರಿ 02 ರಿಂದ 12ರ ವರೆಗೆ ಹತ್ತು ದಿನಗಳ ಕಾಲ ನಡೆಯುವ ಈ ಆಭಿಯಾನದಲ್ಲಿ 5 ಪ್ರಮುಖ ಕಾರ್ಯಕ್ರಮ ಹಾಕಿಕೊಂಡಿದೆ. ಬೂತ್ ಮಟ್ಟದ ಸದಸ್ಯರ ಕಾರ್ಯ ವೈಖರಿ, ಪಂಚರತ್ನ ತಂಡದ ಕಾರ್ಯಕ್ರಮಗಳ ಪರಿಶೀಲನೆ, ಪೇಜ್ ಮುಖಂಡರ ನೇಮಕ, 100 ಜನರನ್ನು ಒಳಗೊಂಡ ವಾಟ್ಸಫ್ ಗ್ರೂಪ್ ರಚನೆ, ವಾರ್ಡ್ನ ಕನಿಷ್ಟ 25 ಜನ ಕಾರ್ಯಕರ್ತರ ಮನೆಯ ಮೇಲೆ ಜನ ಬಿಜೆಪಿಯು ಪಕ್ಷದ ಬಾವುಟ ಹಾಗೂ ಮನ್ ಕೀ ಬಾತ್ ವೀಕ್ಷಣೆ ಈ ಐದು ಕಾರ್ಯ ಮಾಡುವ ಮೂಲಕ ಬೂತ್ನ ಸಶಕ್ತಿಕರಣಗೊಳಿಸುವ ಉದ್ದೇಶ ಹೊಂದಲಾಗಿದೆ. ಇಂದಿನಿಂದ ರಾಷ್ಟ್ರದಾದ್ಯಂತ ಈ ಅಭಿಯಾನ ಆರಂಭವಾಗಿದ್ದು, ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ನಡೆಯಲಿದೆ ಎಂದರು.

ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ, ಮುಂಬರುವ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇದು ಮಹತ್ವದ ಕಾರ್ಯಕ್ರಮವಾಗಿದ್ದು, ಬಿಜೆಪಿ ಕಾರ್ಯಕರ್ತರು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಪ್ರತಿ ಮನೆ ಮನೆಗೆ ದೇಶಕ್ಕೆ ಬಿಜೆಪಿ ಪಕ್ಷ ಏಕೆ ಬೇಕು. ಪಕ್ಷದಿಂದ ಆಗಿರುವ ಕಾರ್ಯಕ್ರಮಗಳೇನು ಎಂಬುದರ ಅರಿವು ಮೂಡಿಸುವುದರ ಜೊತೆಗೆ ನಮ್ಮ ಕಾರ್ಯಕರ್ತರನ್ನು ಸಕ್ರಿಯಗೊಳಿಸಿ ಮತದಾರರ ಡಾಟಾಬೇಸ್ ಹೊಂದಲು ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ 224 ನೇ ಬೂತ್ ಮಾದರಿಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ 224 ನೇ ವಾರ್ಡ್ನ ಬೂತ್ ಕಮಿಟಿ ಅಧ್ಯಕ್ಷ ಜಗದೀಶ್ ಮಾತನಾಡಿ, ಪಕ್ಷ ನೀಡಿರುವ ಜವಾಬ್ದಾರಿಗಳನ್ನು ನಿರ್ವಹಿಸಲು ಸಿದ್ಧರಿರುವುದಾಗಿ ತಿಳಿಸಿದರು.
ಬಿಜೆಪಿ ಕಾರ್ಯಕರ್ತ ಸತೀಶ್, ಬಿಜೆಪಿ ನಗರ ಮಂಡಲ ಅಧ್ಯಕ್ಷ ಟಿ.ಹೆಚ್.ಹನುಮಂತರಾಜು, ಕಾರ್ಯದರ್ಶಿಗಳಾದ ರಾಜೀವ್ ಮತ್ತು ಗಣೇಶ್, ಉಪಾಧ್ಯಕ್ಷರಾದ ವಿರೂಪಾಕ್ಷಪ್ಪ, ಶಂಕರ್, ಗಂಗಾಧರ, ಯುವ ಮೋರ್ಚಾ ಅಧ್ಯಕ್ಷ ನಾಗೇಂದ್ರ, ಕೆ.ಪಿ.ಮಹೇಶ್, ಜೆ.ಜಗದೀಶ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!