ಕುಣಿಗಲ್: ಪಟ್ಟಣ ಸೇರಿದಂತೆ ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತರು ಬೈಕ್, ವಾಹನ ಚಾಲನೆ ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ಪೋಷಕರು ಗಮನ ವಹಿಸದೆ ಇದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕುಣಿಗಲ್ ಸಿಪಿಐ ಗುರುಪ್ರಸಾದ್ ತಿಳಿಸಿದ್ದಾರೆ.
ಅಪ್ರಾಪ್ತರ ವಾಹನ ಚಾಲನೆ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ಹಲವು ಕಾರ್ಯಕ್ರಮಗಳ ಮೂಲಕ ಈಗಾಗಲೇ ಹಲವು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು, ಪೋಷಕರಿಗೂ ಸಹ ತಿಳುವಳಿಕೆ ಮೂಡಿಸಲಾಗಿದೆ. ಆದರೂ ಮಕ್ಕಳು ವಾಹನ, ಬೈಕ್ ಚಲಾವಣೆ ಮಾಡುತ್ತಿರುವುದು, ವೀಲಿಂಗ್ ಮಾಡುವುದು, ಏಕ ಮುಖ ಸಂಚಾರದಲ್ಲಿ ನುಗ್ಗುವುದು ಕಾನೂನು ಹಾಗೂ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿರುವುದು ಬೆಳಕಿಗೆ ಬರುತ್ತಿದೆ. ಇದರಿಂದ ಇತರೆ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಈಗಾಗಲೇ ಹಲವು ಬಾರಿ ಎಚ್ಚರಿಕೆ ನೀಡಿದ್ದು ಮುಂದಿನ ದಿನಗಳಲ್ಲಿ ಮಕ್ಕಳು ವಾಹನ ಚಲಾಯಿಸುವುದು. ಏಕಮುಖ ಸಂಚಾರದ ಉಲ್ಲಂಘನೆ, ಮೊಬೈಲ್ ಬಳಕೆ, ವೀಲಿಂಗ್, ದಾಖಲೆ ಇಲ್ಲದೆ ವಾಹನ ಚಾಲನೆ ಇತ್ಯಾದಿ ನಿಯಮ ಉಲ್ಲಂಘನೆಯಾದಲ್ಲಿ ವಾಹನಗಳನ್ನು ವಶಕ್ಕೆ ಪಡೆದು ಕೇಸು ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.
Get real time updates directly on you device, subscribe now.
Prev Post
Next Post
Comments are closed.