ಗುಬ್ಬಿ: ತಾಲ್ಲೂಕು ಕಚೇರಿಯಲ್ಲಿ ರೈತರಿಗೆ ಬಗರ್ ಹುಕುಂ ಸಾಗುವಳಿ ಪತ್ರ ನೀಡಲು ಬಗರ್ ಹುಕುಂ ಕಮಿಟಿ ಸಭೆ ಕರೆಯಲಾಗಿತ್ತು. ಈ ಮಧ್ಯದಲ್ಲಿ ಬಗರ್ ಹುಕುಂ ಕಮಿಟಿ ಸದಸ್ಯರು ಹಾಗೂ ಶಾಸಕರ ನಡುವೆ ಜಟಾಪಟಿ ನಡೆದು ಸಭೆ ನಡೆಯದೆ ಅಧರ್ಕ್ಕೆ ನಿಂತ ಘಟನೆ ನಡೆಯಿತು.
ಈ ಸಂದರ್ಭದಲ್ಲಿ ಮಾಧ್ಯಮ ಜೊತೆಗೆ ಶಾಸಕ ಶ್ರೀನಿವಾಸ್ ಮಾತನಾಡಿ, ಬಗರ್ ಹುಕುಂ ಕಮಿಟಿಯ ಮೂಲಕ ರೈತರಿಗೆ ಸಾಗುವಳಿ ಚೀಟಿ ನೀಡಬೇಕೆಂದು ನಾನು ಮುಂದಾದರೆ ಬಿಜೆಪಿ ಪಕ್ಷದ ಬಗರ್ ಹುಕುಂ ಸದಸ್ಯರು ಸಹಿ ಹಾಕುವುದಿಲ್ಲ ಎಂದು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಬೇಕೆಂದೇ ಬಗರ್ ಹುಕುಂ ಸದಸ್ಯರು ಸಭೆಗೆ ತಡವಾಗಿ ಆಗಮಿಸಿದ್ದಾರೆ. ರೈತರ ಪರವಾದ ಕೆಲಸ ಮಾಡಲು ನಾನು ಮುಂದಾದರೆ ಬಿಜೆಪಿ ಪಕ್ಷ ರೈತರಿಗೆ ಅನ್ಯಾಯ ಮಾಡಲು ಮುಂದಾಗಿದೆ. ಅವರಿಗೆ ರೈತರ ಕಷ್ಟ ಸುಖ ಗೊತ್ತಿಲ್ಲ. ಕಳೆದ ವರ್ಷ ಸಾವಿರಾರು ರೈತರಿಗೆ ಬಗರ್ ಹುಕುಂ ಪತ್ರ ನೀಡುವ ಮೂಲಕ ರೈತರ ಹಿತ ಕಾಪಾಡಿದ್ದೆ. ಹಿಂದೆ ಇದ್ದಂತಹ ಸದಸ್ಯರು ಎಲ್ಲಾ ರೀತಿಯ ಸಹಕಾರ ನೀಡಿದ್ದರು. ಆದರೆ ಈ ಬಿಜೆಪಿ ಸದಸ್ಯರು ಸಹಕಾರ ನೀಡದೆ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ಈಗಿನ ಸದಸ್ಯರು ಕೆಲವು ಬಿಜೆಪಿ ಮುಖಂಡರ ಮಾತು ಕೇಳಿ ಸಹಿ ಹಾಕಲು ಮುಂದಾಗುತ್ತಿಲ್ಲ. ರೈತರ ವಿಚಾರಲ್ಲಿ ನೀವು ರಾಜಕೀಯ ಮಾಡಬೇಡಿ. ಮುಂದೆ ನಾಲ್ಕು ತಿಂಗಳ ನಂತರ ರಾಜಕೀಯ ಮಾಡೋಣ. ಸಾಗುವಳಿ ಚೀಟಿಯನ್ನು ಹೆಚ್ಚು ಜನರಿಗೆ ನಾನು ನೀಡಿದರೆ ರೈತರು ಮತ ಹಾಕಿ ಮತ್ತೆ ಗೆಲ್ಲಿಸುತ್ತಾರೆ ಎಂಬ ಭಯದಲ್ಲಿ ಬಿಜೆಪಿ ಪಕ್ಷದವರು ಹೀಗೆ ಮಾಡುತ್ತಾರೆ ಎಂದು ಆರೋಪ ಮಾಡಿದರು. ಈ ಸಂದರ್ಭದಲ್ಲಿ ಆಗಮಿಸಿದ್ದ ರೈತರು ಬಿಜೆಪಿ ಪಕ್ಷದ ವಿರುದ್ಧ ಪ್ರತಿಭಟನೆ ಮಾಡಿದರು.
Comments are closed.