ಶುದ್ಧ ನೀರು ಆರೋಗ್ಯ ಕಾಪಾಡುತ್ತೆ: ಜ್ಯೋತಿಗಣೇಶ್

62

Get real time updates directly on you device, subscribe now.


ತುಮಕೂರು: ಜವಾಬ್ದಾರಿಯುತ ನಾಗರಿಕರಾಗಿ ಸಮುದಾಯಗಳ ಆರೋಗ್ಯ, ಸುರಕ್ಷತೆ ಮತ್ತು ನೈರ್ಮಲ್ಯ ಕಾಪಾಡಲು ಹಾಗೂ ಸಮಾಜದ ಅಗತ್ಯತೆ ಅರ್ಥಮಾಡಿಕೊಂಡು ಅಗತ್ಯ ನೆರವು ನೀಡಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.

ನಗರದ ಎಂಪ್ರೆಸ್ ಕಾಲೇಜ್ನ ಆವರಣದಲ್ಲಿ ದಿ ಪಾರ್ವಡ್ ಪೌಂಡೇಷನ್ ಬೆಂಗಳೂರು ಇವರು ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶುದ್ಧ ಕುಡಿಯುವ ನೀರು ಪಡೆಯುವುದು ಮನುಷ್ಯನ ಮೂಲಭೂತ ಅಗತ್ಯಗಳಲ್ಲಿ ಪ್ರಮುಖವಾದದ್ದು, ಈ ಸರ್ಕಾರಿ ಕಾಲೇಜ್ಗೆ ಜಿಲ್ಲೆಯ ವಿವಿಧ ಭಾಗಗಳ 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, ಈ ನೀರಿನ ಘಟಕದ ಸ್ಥಾಪನೆಯಿಂದ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಾಗಿದೆ.

ಶುದ್ದ ನೀರಿನ ಸೇವನೆಯಿಂದ ಉತ್ತಮ ಆರೋಗ್ಯ ಕಾಪಾಡಬಹುದಾಗಿದ್ದು, ಇದಕ್ಕಾಗಿ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ ದಿ ಪಾರ್ವಡ್ ಪೌಂಡೇಷನ್ ಬೆಂಗಳೂರು ಇವರಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ. ಸಿಎಸ್ಆರ್ ಅನುದಾನವನ್ನು ಸಮಾಜಕ್ಕೆ ಉಪಯೋಗವಾಗುವ ಇಂತಹ ಸುಸ್ಥಿರ ಮತ್ತು ಅರ್ಥಪೂರ್ಣ ಯೋಜನೆಗಳಿಗೆ ಬಳಸಿಕೊಳ್ಳಬೇಕು. ಇಂತಹ ಕಾರ್ಯಗಳೂ ಸಮಾಜಕ್ಕೆ ಸದಾ ಕೊಡುಗೆ ನೀಡುತ್ತವೆ. ಸರ್ಕಾರದ ಜತೆಗೆ ಸರ್ಕಾರೇತರ ಸಂಘ, ಸಂಸ್ಥೆಗಳು ಇದೇ ರೀತಿ ನೆರವಾಗಲು ಮುಂದೆ ಬಂದರೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳಿದರು.

ನೂತನವಾಗಿ ಸ್ಥಾಪಿಸಲಾದ ಶುದ್ಧ ಕುಡಿಯುವ ನೀರಿನ ಘಟಕವು ಗಂಟೆಗೆ 250 ಲೀಟರ್ ಪೂರೈಕೆ ಮಾಡುವ ಸಾಮರ್ಥ್ಯ ಹೊಂದಿದ್ದು, 4 ಹಂತದ ಶುದ್ಧೀಕರಣ ವ್ಯವಸ್ಥೆ ಹೊಂದಿದೆ. ಸುಧಾರಿತ ಘಕಟವು ನೈಜ ಸಮಯದಲ್ಲಿ ನೀರನ್ನು ಶುದ್ಧೀಕರಿಸುವ ವ್ಯವಸ್ಥೆ ಹೊಂದಿದೆ. ಅಲ್ಲದೆ ಶುದ್ಧೀಕರಿಸಿದ ನೀರಿನ ಉನ್ನತ ಗುಣಮಟ್ಟ ತಿಳಿಸಲು ಒಟ್ಟು ಕರಗಿದ ಘನ ವಸ್ತುಗಳು, ಪಿಎಚ್ ಮೌಲ್ಯದ ವಿಷಯಗಳ ಬಗ್ಗೆ ಮಾಹಿತಿ ನೀಡುತ್ತದೆ. ದಟ್ಟಣೆ ನಿವಾರಿಸಲು ಈ ಘಟಕಕ್ಕೆ ಹಲವು ಕಡೆ ನೀರು ಪೂರೈಸುವ ವ್ಯವಸ್ಥೆ ಅಳವಡಿಸಲಾಗಿದೆ. ಇದಲ್ಲದೆ ಘಟಕವು ವಿದ್ಯುತ್ ಬ್ಯಾಕಪ್, ತ್ಯಾಜ್ಯ ನೀರಿನ ನಿರ್ವಹಣೆ ಮಾಡುವ ವ್ಯವಸ್ಥೆ ಹೊಂದಿದೆ. ಘಟಕವು ಬಹುಕಾಲ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡಲು 03 ವರ್ಷ ಘಟಕ ನಿರ್ವಹಣೆಯನ್ನು ಸಂಸ್ಥೆಯೆ ಮಾಡಲಿದೆ. ಇದೇ ರೀತಿ ನಮ್ಮ ಬದ್ಧತೆ ಮುಂದುವರೆಯಲಿದ್ದು, ಸಮಾಜ ಸುಧಾರಣೆಗೆ ಶ್ರಮಿಸುತ್ತೇವೆ ಎಂದು ದಿ ಪಾರ್ವಡ್ ಪೌಂಡೇಷನ್ನ ಜಿ.ವಿ ಕೃಷ್ಣ ಹೇಳಿದರು.

ಈ ಸಂದರ್ಭದಲ್ಲಿ ಪ್ರೌಢಶಾಲೆಯ 500 ವಿದ್ಯಾರ್ಥಿನಿಯರಿಗೆ ಸರ್ಕಾರದ ವತಿಯಿಂದ ಉಚಿತ ಶೂ ಮತ್ತು ಸಾಕ್ಸ್ ವಿತರಿಸಲಾಯಿತು.

ಉಪನ್ಯಾಸಕರಾದ ಡಾ.ಎ.ಒ.ನರಸಿಂಹಮೂರ್ತಿ, ಡಾ.ಹೆಚ್.ಎಂ.ಸದಾಶಿವಯ್ಯ, ರಾಮಣ್ಣ, ಪ್ರಾಚಾರ್ಯ ಷಣ್ಮುಖ.ಎಸ್, ಉಪ ಪ್ರಾಚಾರ್ಯ ಶಿವಾಜಿರಾವ್, ದಿ ಪಾರ್ವಡ್ ಪೌಂಡೇಷನ್ ಸಂಸ್ಥೆಯ ರಾಮ್ ಪ್ರಕಾಶ್, ಮಾರುತಿ ಇಂಟರ್ ನ್ಯಾಷನಲ್ ಸ್ಕೂಲ್ನ ಕಾರ್ಯದರ್ಶಿ ಜಿ.ವಿ.ಶ್ರೀನಿವಾಸ ಇತರರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!