ಅಗ್ನಿ ಅವಘಡದಲ್ಲಿ ಆಟೋ, ಕಾರು ಭಸ್ಮ

138

Get real time updates directly on you device, subscribe now.


ಕುಣಿಗಲ್: ಮನೆ ಮುಂದೆ ನಿಲ್ಲಿಸಿದ್ದ ಅಟೋರಿಕ್ಷಾ ಹಾಗೂ ಮಾರುತಿ ವ್ಯಾನ್ ಬುಧವಾರ ಮಧ್ಯರಾತ್ರಿ ಬೆಂಕಿ ಆಕಸ್ಮಿಕದಿಂದ ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ.

ಪಟ್ಟಣದ 17ನೇ ವಾರ್ಡ್ನ ಕೋಟೆ ಪ್ರದೇಶದ ತಿರುಮಲ ಕಲ್ಯಾಣ ಮಂಟಪದ ಸಮೀಪದಲ್ಲಿ ಮನೆ ಮುಂದೆ ಆಟೋ ರಿಕ್ಷಾ ಹಾಗೂ ಮಾರುತಿ ವ್ಯಾನ್ ನಿಲ್ಲಿಸಲಾಗಿತ್ತು. ಮಧ್ಯರಾತ್ರಿಯಲ್ಲಿ ಆಟೋಗೆ ಬೆಂಕಿ ಹೊತ್ತಿಕೊಂಡಿದ್ದನ್ನು ಕಂಡ ಸಮೀಪದ ಮನೆಯವರು ಕೂಗಿಕೊಂಡ ಹಿನ್ನೆಲೆಯಲ್ಲಿ ಇತರೆ ಆಟೋದವರು ತಮ್ಮ ಆಟೋ ರಿಕ್ಷಾಗಳನ್ನು ದೂರ ತಳ್ಳಿ, ಅಗ್ನಿಶಾಮಕ ಇಲಾಖೆಗೆ ಕರೆ ಮಾಡಿದ ಮೇರೆಗೆ ತಡರಾತ್ರಿ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಇಲಾಖೆ ಬೆಂಕಿ ನಿಯಂತ್ರಿಸಿದ್ದು, ಹೆಚ್ಚಿನ ಅನಾಹುತ ತಪ್ಪಿದೆ.

ಆಟೋ ರಿಕ್ಷಾದ ಪಕ್ಕದಲ್ಲೆ ನಿಂತಿದ್ದ ಮಾರುತಿ ವ್ಯಾನ್ ಹೊರ ತೆಗೆಯಲಾರದೆ ಅದೂ ಸಹ ಸುಟ್ಟು ಹೋಗಿದೆ. ಅಸ್ಲಾಂ ಎಂಬಾತ ಕಳೆದ ಕೆಲ ದಿನಗಳ ಹಿಂದಷ್ಟೆ ಸಾಲ ಮಾಡಿ ಎರಡು ಲಕ್ಷ ರೂ. ಮೌಲ್ಯದ ಹೊಸ ಆಟೋ ಖರೀದಿಸಿದ್ದ, ಘಟನೆಯಲ್ಲಿ ಆಟೋ ಸುಟ್ಟು ಭಸ್ಮವಾಗಿದ್ದು ಆತನ ಕುಟುಂಬ ಬೀದಿಗೆ ಬೀಳುವಂತಾಗಿದೆ. ಘಟನಾ ಸ್ಥಳಕ್ಕೆ ಗುರುವಾರ ಬೆಳಗ್ಗೆ ಶಾಸಕ ಡಾ.ರಂಗನಾಥ್ ಭೇಟಿ ನೀಡಿ ಆಟೋ ಚಾಲಕನಿಗೆ ಸಾಂತ್ವನ ಹೇಳಿ ಧನ ಸಹಾಯ ಮಾಡಿದರು. ಪುರಸಭೆ ಅಧ್ಯಕ್ಷ ರಂಗಸ್ವಾಮಿ, 17ನೇ ವಾರ್ಡ್ ಸದಸ್ಯೆ ಆಸ್ಮ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಮಾರುತಿ ವ್ಯಾನ್ ರಫೀಕ್ ಎಂಬುವರಿಗೆ ಸೇರಿದ್ದು ಒಂದುವರೆ ಲಕ್ಷ ರೂ. ಮೌಲ್ಯದ್ದಾಗಿದೆ. ಅಗ್ನಿ ಆಕಸ್ಮಿಕಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.

Get real time updates directly on you device, subscribe now.

Comments are closed.

error: Content is protected !!