ಆದಿಯೋಗಿ ಪ್ರತಿಮೆ ಅನಾವರಣ ಜ.15ಕ್ಕೆ

ಪ್ರತಿಮೆ ಅನಾವರಣಕ್ಕೆ ಹೈಕೋರ್ಟ್ ಹಸಿರು ನಿಶಾನೆ

248

Get real time updates directly on you device, subscribe now.


ತುಮಕೂರು: ಚಿಕ್ಕಬಳ್ಳಾಪುರ ತಾಲೂಕಿನ ಆವಲಗುರ್ಕಿ ಸಮೀಪದ ಕೌರನಹಳ್ಳಿ ಬಳಿ ಇರುವ ಸದ್ಗುರು ಸನ್ನಿಧಿಯಲ್ಲಿ ಆದಿಯೋಗಿ ಪ್ರತಿಮೆ ಅನಾವರಣಕ್ಕೆ ರಾಜ್ಯ ಹೈಕೋರ್ಟ್ ಹಸಿರು ನಿಶಾನೆ ನೀಡಿದೆ.

ಹೈಕೋರ್ಟ್ ವಿಭಾಗೀಯ ಪೀಠವು ಇಶಾ ಫೌಂಡೇಶನ್ ತನ್ನ ನಿಗದಿತ ಕಾರ್ಯವನ್ನು ಜ.15, 2023 ರಂದು ಪೂರ್ವಯೋಜಿತ ರೀತಿಯಲ್ಲಿ ಮುಂದುವರಿಸಬಹುದು ಎಂದು ಸ್ಪಷ್ಟಪಡಿಸಿದೆ. ಅರ್ಜಿದಾರರು ಮತ್ತು ಪ್ರತಿವಾದದ ಎರಡೂ ವಾದಗಳನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ವರಾಳೆ ನೇತೃತ್ವದ ಪೀಠವು, ಕಾರ್ಯ ಮತ್ತು ಚಟುವಟಿಕೆಗಳನ್ನು ಯೋಜಿಸಿದ ರೀತಿಯಲ್ಲಿಯೇ ನಡೆಸಬಹುದು ಎಂದು ಸ್ಪಷ್ಟಪಡಿಸಿದೆ.

ಈಶಾ ಫೌಂಡೇಷನ್ ಸಂಸ್ಥಾಪಕ ಜಗ್ಗಿ ವಾಸುದೇವ್ ನೇತೃತ್ವದಲ್ಲಿ ಜ.15 ಸಂಜೆ 6 ಗಂಟೆಗೆ ಭಾರತದ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ಆದಿಯೋಗಿ ಪ್ರತಿಮೆ ಅನಾವರಣಗೊಳಿಸಲಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸೇರಿದಂತೆ ಅನೇಕ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ.

ಅರು ವರ್ಷಗಳ ಹಿಂದೆ, ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಆದಿಯೋಗಿ ಪ್ರತಿಮೆ ಅನಾವರಣಗೊಳಿಸಿದ್ದರು. ಜಗತ್ತಿನಾದ್ಯಂತ ಈ ಆಧ್ಯಾತ್ಮದ ಸನ್ನಿಧಿಯ 112 ಅಡಿ ಎತ್ತರ ಆದಿಯೋಗಿ ಪ್ರತಿಮೆಯನ್ನು ನೋಡಲು ಲಕ್ಷಾಂತರ ಮಂದಿ ಭೇಟಿ ನೀಡಿರುವುದು ಆಧ್ಯಾತ್ಮದ ವಿಶೇಷತೆಯಲ್ಲಿ ಹೊಸ ದಾಖಲೆ ನಿರ್ಮಿಸಿದೆ ಎನ್ನಲಾಗಿದೆ.

ಸದ್ಗುರು ಸನ್ನಿಧಿಯಲ್ಲಿ ಈಶ ಹೋಂ ಸ್ಕೂಲ್, ಭಾರತೀಯ ಪರಂಪರೆಯ ಲಲಿತಕಲೆಗಳ ಈಶ ಸಂಸ್ಕೃತಿ ಮತ್ತು ಈಶ ಲೀಡರ್ಶಿಪ್ ಅಕಾಡೆಮಿ ಕೂಡ ಆರಂಭವಾಗುತ್ತಿರುವುದು ಇಲ್ಲಿನ ವಿಶೇಷತೆಗೆ ಸಾಕ್ಷಿಯಾಗಿದೆ.

Get real time updates directly on you device, subscribe now.

Comments are closed.

error: Content is protected !!