ಬಿಜೆಪಿ, ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆ

209

Get real time updates directly on you device, subscribe now.


ಗುಬ್ಬಿ: ತಾಲೂಕಿನ ಚಂದ್ರಶೇಖರಪುರ ಗ್ರಾಮದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ತೊರೆದು ಕೃಷ್ಣಪ್ಪ ನೇತೃತ್ವದಲ್ಲಿ ಜೆಡಿಎಸ್ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ನನ್ನ ಕಾಲದಲ್ಲಿ ಸಿ.ಎಸ್.ಪುರದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಈಗ ಗೆದ್ದಿರುವ ಶಾಸಕರು ಪ್ರತಿ ಕೆಲಸದಲ್ಲಿ ಕಮಿಷನ್ ತೆಗೆದುಕೊಂಡು ನಾಟಕ ಮಾಡುತ್ತಿದ್ದಾರೆ ಅಷ್ಟೇ. ಇವರಿಂದ ಯಾವುದೇ ಅಭಿವೃದ್ಧಿ ಕೆಲಸ ಇಲ್ಲ. ಕುಮಾರಸ್ವಾಮಿ ಮಾಡಿರುವ ಪಂಚರತ್ನ ಯೋಜನೆ ದೂರದ ದೃಷ್ಟಿ ಇಟ್ಟು ಕೊಂಡು ಮಾಡಿರುವ ಯೋಜನೇಯಾಗಿದೆ. ಇದರ ಮೂಲಕ ಪ್ರತಿ ಹಳ್ಳಿಗಳು ಅಭಿವೃದ್ಧಿ ಪಥದಲ್ಲಿ ಸಾಗುತ್ತವೆ ಎಂದು ತಿಳಿಸಿದರು.

ಜೆಡಿಎಸ್ ಮುಖಂಡ ರಮೇಶ್ ಮಾತನಾಡಿ, ಎಂ.ಟಿ.ಕೃಷ್ಣಪ್ಪ ನವರು ನೇರವಾದಿ, ಅವಗಿರುವ ಗಟ್ಸ್ ಯಾರಿಗೂ ಇಲ್ಲ. ಹೇಗೆಲ್ಲ ಕೆಲಸ ಮಾಡಿಸಬೇಕು, ಅನುದಾನ ಹೇಗೆಲ್ಲ ತರಬಹುದು ಎಂದು ತಿಳಿದಿರುವ ನಾಯಕ ಅವರು. ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಶತಸಿದ್ಧ. ಹಾಗೆಯೇ ತುರುವೇಕೆರೆ ಕ್ಷೇತ್ರದಲ್ಲಿ ಶಾಸಕರಾಗುವುದು ಎಂ.ಟಿ.ಕೃಷ್ಣಪ್ಪ ಅವರೇ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಬಾಣಸಂದ್ರ ರಮೇಶ್, ಜೆಡಿಎಸ್ ಹೋಬಳಿ ಅಧ್ಯಕ್ಷ ಬೋರಪ್ಪನಹಳ್ಳಿ ಕುಮಾರಣ್ಣ, ಗ್ರಾಮ ಪಂಚಾಯಿತಿ ಸದಸ್ಯ ಈಶ್ವರ್ ಗೌಡ, ನಾಗರಾಜ್ ಬೆನಕನಗೊಂದಿ, ಬಸವರಾಜು ಮಗ್ಗಿಕುಪ್ಪೆ, ಎಸ್ಸಿ ಘಟಕದ ಗಿರೀಶ್, ನವೀನ್ ಕುಮಾರ್, ಮಂಜುನಾಥ್ ಕಲ್ಲೂರು ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!