ತುಮಕೂರು: ಕರ್ನಾಟಕ ಸ್ವದೇಶಿ ಜಾಗರಣ ಮಂಚ್ ವತಿಯಿಂದ ಜ.18 ರಿಂದ 22 ರ ವರೆಗೆ 5 ದಿನಗಳ ಕಾಲ ನಗರದ ಅಮಾನಿಕೆರೆ ಗಾಜಿನ ಮನೆ ಆವರಣದಲ್ಲಿ ಸ್ವದೇಶಿ ಮೇಳ ಆಯೋಜಿಸಲಾಗಿದೆ ಎಂದು ಕ್ಷೇತ್ರಿಯ ಸಂಘಟಕ ಹಾಗೂ ಮೇಳದ ಸಂಯೋಜಕ ಕೆ.ಜಗದೀಶ್ ತಿಳಿಸಿದ್ದಾರೆ.
ದೇಸಿಯ ಉತ್ಪಾದಕರಿಗೆ ಮಾರುಕಟ್ಟೆ ಒದಗಿಸುವುದು. ದೇಶದ ಜನರಿಗೆ ನಮ್ಮ ಉತ್ಪನ್ನ ಪರಿಚಯಿಸುವುದು ಮೇಳದ ಉದ್ದೇಶವಾಗಿದ್ದು, ನಮ್ಮ ಉತ್ಪನ್ನಗಳಿಗೆ ಬ್ರಾಂಡ್ ನೀಡುವ ವ್ಯವಸ್ಥೆ, ಸಣ್ಣ, ಸಣ್ಣ ಉತ್ಪಾದಕರು ಗುಡಿ ಕೈಗಾರಿಕೆ ನಡೆಸುವವರಿಗೆ ಉತ್ಪನ್ನಗಳ ಮಾರಾಟ ಇದರ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.
ಜ.18 ರಂದು ಸಂಜೆ 5.30ಕ್ಕೆ ರಾಜ್ಯಸಭಾ ಸದಸ್ಯ ಜಗ್ಗೇಶ್, ಶಾಸಕ ಜ್ಯೋತಿಗಣೇಶ್, ತೇಜಸ್ವಿನಿ ಅನಂತಕುಮಾರ್ ಉದ್ಘಾಟನೆ ನೆರವೇರಿಸುವರು.
ಸುಮಾರು 150ಕ್ಕೂ ಅಧಿಕ ಮಳಿಗೆಗಳ ಮೂಲಕ ಉತ್ಪಾದಕರು ತಮ್ಮ ವಿಭಿನ್ನ ಉತ್ಪನ್ನಗಳನ್ನು ಮಾರಾಟ ಮಾಡುವರು. 50 ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸಲಿದ್ದಾರೆ. ರಾಜ್ಯದ ವಿವಿಧ ಪ್ರದೇಶಗಳ ಆಹಾರ ಪರಿಚಯಿಸುವ ಆಹಾರ ಮೇಳ ಸಹ ಆಯೋಜಿಸಲಾಗಿದೆ. ಯಾವುದೇ ಪ್ಲಾಸ್ಟಿಕ್ ಬಳಕೆ ಮಾಡದೆ ಪರಿಸರ ಸ್ನೇಹಿ ಮೇಳ ನಡೆಯಲಿದೆ.
Comments are closed.