ತುಮಕೂರಿನಲ್ಲಿ ಇಸ್ಕಾನ್ ಕಲ್ಚರಲ್ ಸೆಂಟರ್ ಆರಂಭ

102

Get real time updates directly on you device, subscribe now.


ತುಮಕೂರು: ಇಸ್ಕಾನ್ ಕಲ್ಚರಲ್ ಸೆಂಟರ್ ಬೆಂಗಳೂರಿನ ಶಾಖೆಯನ್ನು ತುಮಕೂರು ನಗರದಲ್ಲಿ ಜನವರಿ 15 ರಂದು ಆರಂಭಿಸಲಾಗುತ್ತಿದೆ ಎಂದು ತುಮಕೂರು ಶಾಖೆಯ ಜಗಮೋಹನ್ ಚೈತನ್ಯದಾಸ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತುಮಕೂರು ವಿವಿ ಮುಂಭಾಗದಲ್ಲಿರುವ ಮಹಾಲಕ್ಷ್ಮಿ ಕಂಪ್ಯೂಟರ್ಸ್ನ ಕಟ್ಟಡದ ಸೆಲ್ಲರ್ನಲ್ಲಿ ಇಸ್ಕಾನ್ ಕಲ್ಚರಲ್ ಸೆಂಟರ್ ಆರಂಭಿಸುತಿದ್ದು, ಇಲ್ಲಿ ಹರಿನಾಮ ಸಂಕೀರ್ತನೆ, ಶ್ರೀಮದ್ವಾಗವತಮ್ ಮತ್ತು ಭಗವತ್ ಗೀತೆಯ ಪ್ರವಚನ, ಹರಿನಾಮ ಜಪ, ಭಗವಂತನಿಗೆ ಆರತಿ ಸೇವೆ ಮತ್ತು ಪ್ರಸಾದ ವಿನಿಯೋಗ ಕಾರ್ಯಕ್ರಮ ಜರುಗಲಿವೆ ಎಂದರು.

ಅಮೇರಿಕಾ ದೇಶದ ನ್ಯೂಯಾರ್ಕ್ ನಗರದಲ್ಲಿ 1966ರಲ್ಲಿ ಶ್ರೀಮದ್ ಎ.ಸಿ.ಭಕ್ತಿ ವೇದಾಂತ ಸ್ವಾಮಿ ಪ್ರಭುಪಾದರು ಸ್ಥಾಪಿಸಿದ ಇಂಟರ್ ನ್ಯಾಷನಲ್ ಶ್ರೀಕೃಷ್ಣ ಪ್ರಜ್ಞಾ ಸಂಘ, ಪ್ರಪಂಚದಾದ್ಯಂತ ಶ್ರೀಕೃಷ್ಣ ಮಂದಿರಗಳನ್ನು ಹೊಂದಿದೆ. ಆಧ್ಯಾತ್ಮ ಕೇಂದ್ರಗಳು, ಗೋ ಶಾಲೆಗಳು, ಗುರುಕುಲಗಳು, ನೈಸರ್ಗಿಕ ಕೃಷಿ ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸಿದ್ದು, ಲಕ್ಷಾಂತರ ಭಕ್ತರನ್ನು ಹೊಂದಿದೆ. ತುಮಕೂರು ಜಿಲ್ಲೆಯ ಭಕ್ತರಿಗಾಗಿ ನಗರದ ಮಹಾಲಕ್ಷ್ಮಿ ಆರ್ಕೇಡ್ನಲ್ಲಿ ನೂತನ ಇಸ್ಕಾನ್ ಕಲ್ಚರಲ್ ಸೆಂಟರ್ ತೆರೆಯಲಾಗಿದ್ದು, ಇದರ ಪ್ರಯೋಜನವನ್ನು ಭಕ್ತರು ಪಡೆಯಬೇಕೆಂದರು.

ಜನವರಿ 15ರ 10.30 ಗಂಟೆಗೆ ಜರುಗುವ ಇಸ್ಕಾಲ್ ಭಕ್ತಿ ಸೆಂಟರ್ನ ಉದ್ಘಾಟನೆಯನ್ನು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ನೆರವೇರಿಸುವರು. ಇಸ್ಕಾನ್ ಕಲ್ಚರಲ್ ಸೆಂಟರ್ ಬೆಂಗಳೂರು ಇದರ ಮುಖ್ಯಸ್ಥ ನರಹರಿ ಚೈತನ್ಯದಾಸ್ ಅವರು ಪ್ರಧಾನ ಭಾಷಣ ಮಾಡಲಿದ್ದಾರೆ. ಶಾಸಕ ಜಿ.ಬಿ.ಜೋತಿಗಣೇಶ್, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಟೂಡಾ ಅಧ್ಯಕ್ಷ ಹೆಚ್.ಜಿ.ಚಂದ್ರಶೇಖರ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಇಸ್ಕಾನ್ ಕಲ್ಚರಲ್ ಸೆಂಟರ್ನ ಪ್ರಕಾಶ್, ಅಭಿರಾಮ್, ಶ್ರೀಕೃಷ್ಣ ಕೇಶವ ಪ್ರಭು, ರಮೇಶ್ಬಾಬು, ಅನಿಲ್ ಪ್ರಭು, ಶಿವರಾಮ ಪ್ರಭು ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!