ತುಮಕೂರು: ಬಿಜೆಪಿ ಕಾರ್ಯಕರ್ತರು ಸಂಘಟನೆ ಜೊತೆ ರಾಜಕೀಯ ಪ್ರಜ್ಞೆ ಬೆಳಸಿಕೊಳ್ಳಬೇಕಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್ ಕರೆ ನೀಡಿದರು.
ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಜನವರಿ 21 ರಿಂದ 29ರ ವರೆಗೆ ನಡೆಯುವ ವಿಜಯ ಸಂಕಲ್ಪ ಅಭಿಯಾನದ ಅಂಗವಾಗಿ ನಡೆಯುವ ಮನೆ ಮನೆ ಸಂಪರ್ಕದ ಕಾರ್ಯ ಚಟುವಟಿಕೆಗಳ ಬಗ್ಗೆ ತುಮಕೂರು ನಗರ ಮಂಡಲದ ಪದಾಧಿಕಾರಿಗಳು, ಪ್ರಮುಖರು, ವಾರ್ಡ್ ಅಧ್ಯಕ್ಷರ ಸಭೆಯಲ್ಲಿ ಮಾಹಿತಿ ನೀಡುತ್ತಾ, ಕೇಂದ್ರದ ನರೇಂದ್ರ ಮೋದಿ ಮತ್ತು ರಾಜ್ಯದ ಬಸವರಾಜ ಬೊಮ್ಮಾಯಿ ಅವರ ಡಬಲ್ ಇಂಜಿನ್ ಸರ್ಕಾರಗಳು ತಮ್ಮ ಅಧಿಕಾರವಧಿಯಲ್ಲಿ ರೂಪಿಸಿದ ಯೋಜನೆ, ಕಾರ್ಯಕ್ರಮ, ಅನುಷ್ಠಾನಗಳನ್ನು ಮನೆ ಮನೆಗಳಿಗೆ ತೆರಳಿ ಮತದಾರರಿಗೆ ಮಾಹಿತಿ ನೀಡುವ ಕಾರ್ಯ ಮಾಡಬೇಕಿದೆ. ವಿಜಯ ಸಂಕಲ್ಪ ಅಭಿಯಾನದ ಅಡಿಯಲ್ಲಿ ಕಾರ್ಯಕರ್ತರು ಬೂತ್ನಲ್ಲಿರುವ ಎಲ್ಲಾ ಮನೆಗಳ ಸಂಪರ್ಕ, ಕೇಂದ್ರ- ರಾಜ್ಯ ಸರ್ಕಾರಗಳ ಸಾಧನೆಯ ಕರಪತ್ರ ಮತ್ತು ಸ್ಟಿಕ್ಕರ್ ವಿತರಣೆ, ನೂತನ ಸದಸ್ಯತ್ವ ಅಭಿಯಾನ, ಫಲಾನುಭವಿಗಳ ಸಂಪರ್ಕ, ಗೋಡೆ ಬರಹ ಮತ್ತು ಡಿಜಿಟಲ್ ಗೋಡೆ ಬರಹ ಮಾಡಬೇಕಿದೆ ಎಂದರು.
ಮುಂದಿನ ವಿಧಾನಸಭೆ- 2023ರ ಚುನಾವಣೆ ದೃಷ್ಟಿಯಿಂದ ಬಿಜೆಪಿ ಕಾರ್ಯಕರ್ತರು ತಮ್ಮ ಮತಗಟ್ಟೆಗಳಲ್ಲಿ ಸೇವಾ ಚಟುವಟಿಕೆ ಮಾಡಬೇಕಿದೆ. ಈ ಅಭಿಯಾನದಲ್ಲಿ ಎಲ್ಲಾ ಸ್ಥರದ ಕಾರ್ಯಕರ್ತರು, ಪದಾಧಿಕಾರಿಗಳನ್ನು ಜೋಡಿಸಿಕೊಂಡು ಮತಗಟ್ಟೆ ಪ್ರದೇಶದಲ್ಲೇ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ರಾಜ್ಯದ 57 ಸಾವಿರಕ್ಕೂ ಹೆಚ್ಚು ಬೂತ್ಗಳಲ್ಲಿ ಈ ಬಿಜೆಪಿ ವಿಜಯ ಸಂಕಲ್ಪ ಅಭಿಯಾನ ಜನವರಿ 21 ರಿಂದ 29ರ ವರೆಗೆ ನಡೆಯಲಿದೆ. ತುಮಕೂರು ಸಂಘಟನಾತ್ಮಕ ಜಿಲ್ಲೆಯ 1681 ಬೂತ್ಗಳಲ್ಲಿ ಮೊದಲ ಹಂತದ ಬೂತ್ ವಿಜಯ ಅಭಿಯಾನ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಪ್ರತಿ ಬೂತ್ನ ಅಧ್ಯಕ್ಷರು, ಸದಸ್ಯರು, ಬಿಎಲ್ಎ- 2, ಫಲಾನುಭವಿಗಳು ವಿಜಯ ಸಂಕಲ್ಪ ಅಭಿಯಾನದ ಯಶಸ್ವಿ ಮುಂದಾಗಬೇಕು. ವಾರ್ಡ್, ಶಕ್ತಿಕೇಂದ್ರ, ಮಹಾಶಕ್ತಿಕೇಂದ್ರ, ಮಂಡಲ, ಜಿಲ್ಲೆಗಳ ಎಲ್ಲಾ ಸ್ಥರದ ಪದಾಧಿಕಾರಿಗಳು, ಪ್ರಮುಖರು ಭಾಗವಹಿಸಲಿದ್ದಾರೆಂದು ವಿವರಿಸಿದರು.
ಬಿಜೆಪಿ ನೇತೃತ್ವದ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ 2004ರಲ್ಲಿ ಸೋಲಲು ಕಾರ್ಯಕರ್ತರೇ ಕಾರಣರಾದರು. ವಾಜಪೇಯಿ ಸರ್ಕಾರ ಅಭೂತಪೂರ್ವ ಜನಪರ ಕಾರ್ಯಕ್ರಮಗಳು ಪ್ರಧಾನಮಂತ್ರಿಗಳ ಗ್ರಾಮ ಸಡಕ್ ಯೋಜನೆ, ಸರ್ವ ಶಿಕ್ಷಣ ಅಭಿಯಾನ, ಗೋಲ್ಡನ್ ಕಾರಿಡಾರ್ ರಸ್ತೆ, ಪ್ರೋಕ್ರಾನ್ ಅಣು ಸ್ಪೋಟ, ಪಾಕಿಸ್ತಾನದ ವಿರುದ್ಧ ಕಾರ್ಗಿಲ್ನಲ್ಲಿ ವಿಜಯ, ವಿಶ್ವಬ್ಯಾಂಕ್ ಸೇರಿ ಪ್ರಪಂಚದ ಹಲವಾರು ರಾಷ್ಟ್ರಗಳು ಆರ್ಥಿಕ ದಿರ್ಭಂದನ ಹೇರಿ ಆಗ ವಿದೇಶದಲ್ಲಿ ಭಾರತೀಯರಿಂದ 29 ಸಾವಿರ ಕೋಟಿ ಹಣವನ್ನು ಬಾಂಡ್ ಮೂಲಕ ಸಾಲದ ರೂಪದಲ್ಲಿ ಹಣ ಪಡೆದು, ದೇಶದ ಆರ್ಥಿಕ ಚಟುವಟಿಕೆಗಳಿಗೆ ಬಳಸಿ ದೇಶವನ್ನು ಸಮರ್ಥ ಹಾಗೂ ಯಶಸ್ವಿಯಾಗಿ ಮುನ್ನೆಡಿಸಿದ ಅಪ್ರತಿಮ ಪ್ರಧಾನಿ ವಾಜಪೇಯಿರವರ ಬಗ್ಗೆ ದೇಶವಾಸಿಗಳ ಮನೆ ಮನಗಳನ್ನು ತಲುಪಿಸುವಲ್ಲಿ ಅಂದು ಕಾರ್ಯಕರ್ತರು ವಿಫಲರಾಗಿದ್ದರಿಂದಲೇ ಬಿಜೆಪಿ ಸೋಲಿಗೆ ಕಾರಣವಾಯಿತು ಎಂದರು.
ಬಿಜೆಪಿ ಕಾರ್ಯಕರ್ತರು ಮನೆ-ಮನೆಗೆ ತೆರಳಿ 1 ಕೋಟಿ ಹೊಸ ಸದಸ್ಯತ್ವ ಮಾಡುವ ದೃಷ್ಠಿಯಿಂದ ಬಿಜೆಪಿ ವಿಜಯ ಸಂಕಲ್ಪ ಅಭಿಯಾನದ ಸಂದರ್ಭದಲ್ಲಿ ಕಾರ್ಯ ನಿರ್ವಹಿಬೇಕಿದೆ. ಈಗಾಗಲೇ ಬಿಜೆಪಿ ಸದಸ್ಯತ್ವ ಪಡೆದವರ ಜೊತೆಗೆ ಹೊಸದಾಗಿ ಸದಸ್ಯತ್ವವನ್ನು ಇದೇ ಜನವರಿ 21 ರಿಂದ 8000090009ಗೆ ಮಿಸ್ಕಾಲ್ ನೀಡುವ ಮೂಲಕ ನೋಂದಣಿಗಾಗಿ ಕಾರ್ಯ ನಿರ್ವಹಿಸಬೇಕು ಎಂದು ಎಂ.ಬಿ.ನಂದೀಶ್ ಹೇಳಿದರು.
ನಗರ ಮಂಡಲದ ಉಪಾಧ್ಯಕ್ಷ ಹೆಚ್.ಎಸ್.ವಿರೂಪಾಕ್ಷಪ್ಪ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪಿಗೆ ಶ್ರೀಧರ, ಜಿಲ್ಲಾ ಉಪಾಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ಜಿಲ್ಲಾ ವಕ್ತಾರ ಕೆ.ಪಿ.ಮಹೇಶ, ಮಹಾ ನಗರ ಪಾಲಿಕೆ ಸದಸ್ಯ ಹೆಚ್.ಎನ್.ರಮೇಶ್, ಪಾಲಿಕೆ ಪ್ರತಿಪಕ್ಷದ ನಾಯಕ ವಿಷ್ಣುವರ್ಧನ್, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಗಣೇಶ್ ಜಿ.ಪ್ರಸಾದ್, ಪ್ರಧಾನ ಕಾರ್ಯದರ್ಶಿ ರಾಜೀವ್, ಕೃಷ್ಣಮೂರ್ತಿ ಇತರರು ಇದ್ದರು.
Comments are closed.