ಸೆಲ್ಫಿ ಫೋಟೊಗೆ ಆಕ್ಷೇಪ – ಕೇಸು ದಾಖಲು

305

Get real time updates directly on you device, subscribe now.


ಕುಣಿಗಲ್: ಗಸ್ತಿನಲ್ಲಿದ್ದ ಪೊಲೀಸರಿಗೆ ನಿಂದನೆ ಹಾಗೂ ಹಲ್ಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಪಟ್ಟಣದ 18ನೇ ವಾರ್ಡ್ನ ಇಬ್ಬರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿರುವ ಘಟನೆ ನಡೆದಿದೆ.
ಪಟ್ಟಣದ 18ನೇವಾರ್ಡ್ನಲ್ಲಿ ಸೋಮವಾರ ರಾತ್ರಿ ಪೊಲೀಸ್ ಪೇದೆ ಮಿಥುನ್, ಸುಮನ್ ಗಸ್ತಿನಲ್ಲಿದ್ದು ಗಸ್ತಿನ ಜಾಗದ ಸೆಲ್ಫಿ ತೆಗೆಯತ್ತಿದ್ದ ಸಮಯದಲ್ಲಿ 18ನೇವಾರ್ಡ್ನ ರಾಮಣ್ಣ, ವೆಂಕಟೇಶ್ ಎಂಬುವರು ಸೆಲ್ಫಿ ತೆಗೆಯುತ್ತಿದ್ದಕ್ಕೆ ಅಕ್ಷೇಪಿಸಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.
ಈ ವೇಳೆ ಪರಸ್ಪರ ತಳ್ಳಾಟ, ನೂಕಾಟ ನಡೆದು ಪೊಲೀಸ್ ಪೇದೆಯ ಮೊಬೈಲ್ ಹಾನಿಗೊಳಗಾಗಿದ್ದು ಘಟನೆ ಸಂಬಂಧಿಸಿದಂತೆ ಪೇದೆ ಮಿಥುನ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!