ಮೂವರು ಸೋದರಿಯರು ಆತ್ಮಹತ್ಯೆ

28,137

Get real time updates directly on you device, subscribe now.


ಹುಳಿಯಾರು: ಒಂದೇ ಮನೆಯಲ್ಲಿ ಮೂವರು ಸೋದರಿಯರು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಳಿಯಾರು ಹೋಬಳಿಯ ಬರಕನಹಾಲ್ತಾಂಡ್ಯದ ಬಳಿ ಗುರುವಾರ ಸಂಜೆ ಬೆಳಕಿಗೆ ಬಂದಿದೆ.

ರಂಜಿತಾ (24), ಬಿಂಧು (21) ಚಂದನಾ (18) ಆತ್ಮಹತ್ಯೆ ಮಾಡಿಕೊಂಡ ಯುವತಿಯರಾಗಿದ್ದಾರೆ. ಇವರ ತಂದೆ ತಾಯಿ ಇಬ್ಬರೂ ದಶಕಗಳ ಹಿಂದೆಯೇ ನಿಧನರಾಗಿದ್ದರು. ಕಳೆದ 3 ತಿಂಗಳ ಹಿಂದಷ್ಟೆ ಇವರನ್ನು ಸಾಕುತ್ತಿದ್ದ ಅಜ್ಜಿಯೂ ಸಹ ಸಾವನ್ನಪ್ಪಿ ಅನಾಥರಾಗಿದ್ದರು.

ರಂಜಿತಾ (24), ಬಿಂಧು (21) ಇಬ್ಬರೂ ಕೆ.ಬಿ.ಕ್ರಾಸ್ ನ ಗಾರ್ಮೆಂಟ್ಸ್ಗೆ ಕೆಲಸಕ್ಕೆ ಹೋಗುತ್ತಿದ್ದರು. ಚಂದನಾ ವಿದ್ಯಾಭಾಸ್ಯ ಮಾಡುತ್ತಿದ್ದರು. ಈ ಮೂವರೂ ಬಾಲದೇವರಹಟ್ಟಿಯಿಂದ ಬರಕನಹಾಲ್ ತಾಂಡ್ಯಕ್ಕೆ ಹೋಗುವ ದಾರಿಯ ರಸ್ತೆ ಬದಿಯಲ್ಲಿರುವ ತಮ್ಮ ಒಂಟಿ ಮನೆಯಲ್ಲಿ ಕಳೆದ ಒಂಭತ್ತು ದಿನಗಳ ಹಿಂದೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದೇಹ ಕೊಳತೆ ವಾಸನೆ ಬಂದಿದ್ದರಿಂದ ದಾರಿಹೋಕರು ನೋಡಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳಿ ಮನೆಯ ಹೆಂಚು ತೆಗೆದು ನೋಡಲಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ. ಮೃತ ದೇಹವನ್ನು ಹೊರತೆಗೆದು ಚಿಕ್ಕನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆಗೆ ಶವಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.

ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ತಿಪಟೂರು ಎಎಸ್ಪಿ ಸಿದ್ಧಾರ್ಥಗೋಯಲ್, ಚಿಕ್ಕನಾಯಕನಹಳ್ಳಿ ಪಿಎಸ್ಐ ನಿರ್ಮಾಲ, ಹುಳಿಯಾರು ಪಿಎಸ್ಐ ಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Get real time updates directly on you device, subscribe now.

Comments are closed.

error: Content is protected !!